Sunday, September 27, 2009

ಪೆನ್ಸಿಲ್ ಅವಾಂತರ

ಇದು ನಾಲ್ಕೈದು ವರ್ಷಗಳ ಹಿಂದೆ ನಡೆದ ಘಟನೆ. ಅಂದು ಭಾನುವಾರ ಹೈಸ್ಕೂಲ್ ಓದುತ್ತಿದ್ದ ಮಗಳಿಗೆ Male and Female reproductive system ಬಗ್ಗೆ ಪಾಠ ಹೇಳಿ ಕೊಟ್ಟು ಅಡಿಗೆ ಮಾಡಲು ಹೊರಟೆ. ಆಗ ನನ್ನ ಸೋದರ ಮಾವನ ಮಗಳು baby sitting ಗೆ ಹೋಗುತ್ತಿದ್ದ ಮಗ ಶಶಾಂಕನ ಜೊತೆ ಮನೆಗೆ ಬಂದಳು. ಅವನಿಗೆ ABCD ಬರೆಸು ಎಂದು ಹೇಳಿ ನಾವಿಬ್ಬರೂ ಹರಟೆ ಹೊಡೆಯುತ್ತ ಅಡಿಗೆ ಮಾಡುತ್ತಿದ್ದೆವು. ಇದ್ದಕಿದ್ದಂತೆ ಶಶಾಂಕ ನನ್ನ ಮಗಳು ಶ್ರುತಿ ಗೆ ಏನೋ ಹೇಳಿ ಜೋರಾಗಿ ಅಳತೊಡಗಿದ. ಅಡಿಗೆ ಮನೆಯಲ್ಲಿದ್ದ ನಮಗೆ ಅವನು ಏನು ಹೇಳಿದ ಅಥವಾ ಏಕೆ ಅಳುತ್ತಿದ್ದಾನೆಂದು ಅರ್ಥವಾಗದೆ ಇಬ್ಬರು ಹೊರಗೆ ಓಡಿ ಬಂದೆವು. ನೋಡಿದರೆ ಶ್ರುತಿ ಹೊಟ್ಟೆ ಹಿಡಿದು ಬಿದ್ದು ಬಿದ್ದು ನಗುತ್ತಿದ್ದಳು. ಕಾರಣ ಕೇಳಿದಾಗ ಅವಳಿಗೆ ನಗು ನಿಲ್ಲಿಸಿ ಮಾತನಾಡಲು ಕೂಡ ಆಗಲಿಲ್ಲ. ಅವನನ್ನೇ ವಿಚಾರಿಸಿದೆವು. ಆಗ ಅವನು ಅಕ್ಕ ನನ್ನ penis ಮುರಿದುಹಾಕಿಬಿಟ್ಟಳು ಎಂದು ಹೇಳಿ ಇನ್ನೂ ಜೋರಾಗಿ ಅಳತೊಡಗಿದ. ಅವನ ಮಾತು ನಮಗಿಬ್ಬರಿಗೂ ಏನೇನು ಅರ್ಥವಾಗಲಿಲ್ಲ. ಆಗ ನನ್ನ ಮಗಳು ನಗುವಿನ ಮದ್ಯೆಯೇ pencil lead ಮುರಿದು ಹೋಯಿತು ಎಂದಳು. ಅದ್ದನ್ನು ಕೇಳಿ ನಾವಿಬ್ಬರು ನಗಲು ಶುರು ಮಾಡಿದೆವು. ಅವನು ಅಳು ನಿಲ್ಲಿಸಿ ನಮ್ಮನ್ನೇ ಆಶ್ಚರ್ಯದಿಂದ ನೋಡತೊಡಗಿದ. ಇನ್ನು ಸರಿಯಾಗಿ ಮಾತನಾಡಲು ಬರದ್ದಿದ್ದ ಶಶಾಂಕನ ಬಾಯಲ್ಲಿ ಪೆನ್ಸಿಲ್ penis ಆಗಿ ಹೋಗಿತ್ತು. ಈಗಲೂ ಕೂಡ ಅವನನ್ನು ನೋಡಿದರೆ ಆ ಘಟನೆ ನೆನಪಿಗೆ ಬಂದು ನಗು ಉಕ್ಕಿ ಬರುತ್ತದೆ.

13 comments:

  1. Hummmm.... ಪೆನ್ಸಿಲ್ ಕಥೆ ಚೆನ್ನಾಗಿದೆ... ಮಕ್ಕಳ ಮಾತು ಕೇಳೋದೇ ಚೆಂದ ಅಲ್ವೇ...

    ReplyDelete
  2. ರವಿಕಾಂತ್ ಗೋರೆ ಅವರಿಗೆ,
    ಧನ್ಯವಾದಗಳು. ಹೌದು ಮಕ್ಕಳ ಬಾಲ ಭಾಷೆಗೆ ಮನ ಸೋಲದವರು ಯಾರು?

    ಸಂತೋಷ್ ಚಿದಂಬರ್ ಮತ್ತು ಶಿವಪ್ರಕಾಶ್ ಅವರಿಗೆ,
    ಧನ್ಯವಾದಗಳು. ನನ್ನ ಪುಟ್ಟ ಬರಹ ನಿಮಗೆಲ್ಲ ನಗು ಬರಿಸಿದ್ದು ಸಂತೋಷ.

    ReplyDelete
  3. sakkattagide madam. nimma kathe keli nanna ondu anubhava nenapige bantu.

    naanu daily ondu mankutimmana kagga'na type maadi nanna office'na kannada friends'ge kalso havyasa shuru maadkondidda dinagalu avu. cab nalli, canteen'nalli, cafeteria heege elli kannada mathadoru kandroo avra hesru, email id keli, avranna group'ge aad madtha idde.

    heege ondu dina cab nalli obbaru kannada mathadtha idru. naanu avranna alli thanka nodirlilla, aaga thane onsite inda bandiru. avru munde baagila hatra kootidru, naanu hinde seat nalli kootu gamanistha idde. avrige nanna daily mail hogtha idyo annodu tilkobekagittu. yake andre nanna friends froward maado chances kooda ittu.

    naanu avranna "nimage dina beligge naanu kalso kagga barutta?", "illa andre heli, naanu dina beligge office nalli kannadigarigella kagga kalistheeni, so nimagoo kooda kalistheeni.." antha kelde. cab nalli ondu nimisha ella nannanne nodoke shuru maadidru. aa manushya anthoo full shock inda nanne nodtha idda. ashtralli avra stop bande bidtu.

    avru ilidmele can nalli idda ellaroo biddu biddu nagtha iddru. nanage yaake antha artha aagoke swalpa time hideethu. amele obbaru andru, naanu "Kagga" antha heliddu avra kivige "Kakka" antha kelittu. naanu kooda amele nanna sentense'na swalpa nenskonde: "nimage dina beligge naanu kalso kakka barutta?", "illa andre heli, naanu dina beligge office nalli kannadigarigella kakka kalistheeni, so nimagoo kooda kalistheeni.."

    avatte kone, yara hatranoo baree "kagga" antha helodu nillisi bitte. "DVG avra Mankutimmana Kagga" antha poorthi heltheeni :)

    ReplyDelete
  4. ayoo, olle venkata in sakata situation agoythalla venki. Ninna kathe keli nagu thadeyoke agthilla. "DVG avra Mankutimmana Kagga" antha poorthi heloke shuru maddiddu olledaitu.

    ReplyDelete
  5. ಹ್ಹಿ ಹ್ಹಿ, ಚೆನ್ನಾಗಿದೆ. ಇದನ್ನ ಓದಿದಮೇಲೆ ನಾನು ಚಿಕ್ಕೋನಿದ್ದಾಗಿನ ಒಂದು ಘಟನೆ ನೆನಪಿಗೆ ಬಂತು.. ಬರೆಯೊಕ್ಕಾಗಲ್ಲ ಬಿಡಿ. :)

    ReplyDelete
  6. ನಿಶಾ ಮಕ್ಕಳ ಮಾತುಗಳು ಕೆಲವೊಮ್ಮೆ ಮುಜುಗರ ತಮ್ದುಬಿಡುತ್ತೆ ದೊಡ್ಡೋರಿಗೆ...ಐದು ವರ್ಷದ ತುಂಟ ನಮ್ಮಕ್ಕನ ಮಗ ನಸೀಮ್ ಗೆ ಅವನ ಚಿಕ್ಕಮ್ಮನ ಮಗುವಿನ ನಾಮ್ಕರಣಕ್ಕೆ ಕರ್ಕೊಂಡು ಹೋಗಿದ್ವಿ..ಮಗೂ ಬಗ್ಗೆ ಯಾರೋ ಫ್ರಾಕ್ ಹಾಕಿದ್ದೀರಾ ಗಂಡೋ ಹೆಣ್ಣೋ ಅಂತ ಚಿಕ್ಕಮ್ಮನ್ನ ಕೇಳಿದ್ದಕ್ಕೆ ಫ್ರಾಕ್ ಎತ್ತಿ ನೋಡಿ ನೀವೇ ಅಂತ ಹೇಳಿ ಕಕ್ಕಾಬಿಕ್ಕಿ ಮಾಡಿದ್ರು ಅವ್ರನ್ನ (ಚಿಕ್ಕಮ್ಮ ಬಹಳ ತಮಾಶೆ ಸ್ವಭಾವ)...ಮತ್ತೆ ಎಲ್ಲಾ ತಿಂಡಿ ಕಾಫಿ ಮುಗಿದಮೇಲೆ..ನಮ್ಮ ಚಿಕ್ಕಪ್ಪನ್ನ ಅಫೀಸಿಗೆ ಗೆಸ್ಟ್ ಆಗಿ ಬಂದಿದ್ದ ಇಂಗ್ಲೇಂಡಿನ ರೋಸಿ..ಸಹಾ ಇನ್ವೈಟ್ ಮಾಡಿದ್ರು...ಅಲ್ಲೇ ಇದ್ದ ಅಜ್ಜಿ ಸುಮ್ಮನಿರಲಾರದೆ...ಈ ಪರಂಗಿಯಮ್ಮಾ ಹೆಣ್ಣೋ..ಗಂಡೋ ಅಂತ ಪಿಸುಗುಟ್ಟಿದಾಗ...ನಮ್ಮ ಪೋರ ನಸೀಮ..ಅಜ್ಜಿ ಫ್ರಾಕ್ ಎತ್ತಿ ನೋಡಿ ಗೊತ್ತಾಗುತ್ತೆ ಎಂದು ಬಿಡೋದೇ...ಪುಣ್ಯಕ್ಕೆ ಅವರಿಗೆ ಕನ್ನಡ ಬರ್ತಿರ್ಲಿಲ್ಲ....ಎಲ್ಲಾ ನಕ್ಕಿದ್ದು ನೋಡಿ ..ಏನೋ ಜೋಕಿರಬೇಕು ಅಂತ ರೋಸೀನೂ ನಕ್ಕಾಗ..ಎಲ್ಲರೂ ..ಗಪ್-ಚುಪ್...

    ReplyDelete
  7. ಹ ಹ ಹಾ... :) ಸೂಪರ್ ಮಕ್ಳು ಏನೊ ಹೇಳಿದ್ರೆ ಏನೊ ಮಾತಾಡಿಬಿಡುತ್ತವೆ... ಮತ್ತೆ ಮುಜುಗರಕ್ಕೀಡು ಮಾಡಿಬಿಡ್ತವೆ...

    ReplyDelete
  8. ನನಗೂ ಮೊದಲು ಗೊತ್ತಾಗಲಿಲ್ಲ. ಕೊನೆಯಲ್ಲಿ ತುಂಬಾ ನಗು ಬಂತು.

    ReplyDelete
  9. ಆಜಾದ್ ಸರ್, ಶಿವೂ ಸರ್, ಪ್ರಭು ಹಾಗು ಆನಂದ್

    ಎಲ್ಲರಿಗು ನನ್ನ ಬ್ಲಾಗ್ ಮನೆಗೆ ಸುಸ್ವಾಗತ. ನನ್ನ ಬರಹ ನಿಮಗೆಲ್ಲ ನಗು ಬರಿಸಿದ್ದು ಸಂತೋಷ. ಧನ್ಯವಾದಗಳು.

    ReplyDelete
  10. Makkalu kelavomme thiliyade aaduva maathugalu bahala hasyamayavagi iruttave... Chennagide !!

    ReplyDelete
  11. Ramesh avarige

    Nishantarangakke swagatha. Baraha mechidakke dhanyavadagalu.

    ReplyDelete